ಕರ್ನಾಟಕದಲ್ಲಿ ಪರ ಭಾಷೆಯಿಂದ ಕನ್ನಡಕ್ಕೆ ಡಬ್ಬಿಂಗ್ ಮಾಡುವುದರ ಮೇಲಿನ ಸಾರಾಸಗಟು ನಿಷೇಧ ತೆರವುಗೊಳಿಸಲು ಮನವಿ

ಕರ್ನಾಟಕದಲ್ಲಿ ಪರ ಭಾಷೆಯಿಂದ ಕನ್ನಡಕ್ಕೆ ಡಬ್ಬಿಂಗ್ ಮಾಡುವುದರ ಮೇಲಿನ ಸಾರಾಸಗಟು ನಿಷೇಧ ತೆರವುಗೊಳಿಸಲು ಮನವಿ

Started
9 January 2014
Petition to
Chief minister of Karnataka, ಮುಖ್ಯಮಂತ್ರಿಗಳು ಕರ್ನಾಟಕ and
Petition Closed
This petition had 2,241 supporters

Why this petition matters

Started by Priyank KS

ಮಾನ್ಯರೇ,

ಜಗತ್ತಿನಾದ್ಯಂತ ಡಬ್ಬಿಂಗ್‍-ಅನ್ನು ಒಂದು ಭಾಷೆಯಲ್ಲಿರುವ ಜಗತ್ತಿನ ಅತ್ಯುತ್ತಮವಾದ ಜ್ಞಾನ, ಮನರಂಜನೆಯನ್ನು ಇನ್ನೊಂದು ಭಾಷೆಗೆ ತರುವ ಸಾಧನವನ್ನಾಗಿ ನೋಡುತ್ತಾರೆ. ವಿಶ್ವಸಂಸ್ಥೆಯು ಬಾರ್ಸಿಲೋನಾ ಭಾಷಾ ಹಕ್ಕುಗಳಲ್ಲಿ ಡಬ್ಬಿಂಗ್ ಅನ್ನು ಭಾಷೆಯನ್ನು ಪಸರಿಸುವ ಒಂದು ಸಾಧನವನ್ನಾಗಿ ಗುರುತಿಸಿದೆ. ಕರ್ನಾಟಕದಲ್ಲಿ ಡಬ್ಬಿಂಗ್ ಮೇಲೆ ಅಸಂವಿಧಾನಿಕವಾದ ಖಾಸಗಿ ನಿಷೇಧವೊಂದು ಜಾರಿಯಲ್ಲಿದ್ದು ಇದರಿಂದಾಗಿ ಜಗತ್ತಿನ ಅತ್ಯುತ್ತಮವಾದ ಮಾಹಿತಿ, ಜ್ಞಾನ, ಮನರಂಜನೆಯ ಕಾರ್ಯಕ್ರಮಗಳನ್ನು ಕನ್ನಡದಲ್ಲಿ ಸವಿಯುವ ಆಯ್ಕೆ ಸ್ವಾತಂತ್ರ್ಯದಿಂದ ಕನ್ನಡಿಗರು ವಂಚಿತರಾಗಿದ್ದಾರೆ. ಭಾರತದ ಸಂವಿಧಾನದಲ್ಲಾಗಲೀ, ಇತರೆ ರಾಜ್ಯಗಳಲ್ಲಾಗಲಿ ಇಲ್ಲವೇ ಕರ್ನಾಟಕ ರಾಜ್ಯದ ಕಾನೂನಿನಲ್ಲಾಗಲಿ ಎಲ್ಲೂ ಕೂಡಾ ಡಬ್ಬಿಂಗನ್ನು ಕಾನೂನು ಬಾಹಿರ ಅನ್ನುವ ಉಲ್ಲೇಖಗಳಿಲ್ಲ. ಕರ್ನಾಟಕದಲ್ಲಿನ ಡಬ್ಬಿಂಗ್ ಮೇಲಿನ ನಿಷೇಧದಿಂದಾಗಿ ಜ್ಞಾನ ವಾಹಿನಿಗಳಾದ ಡಿಸ್ಕವರಿ, ನ್ಯಾಟ್-ಜಿಯೊ, ಅನಿಮಲ್ ಪ್ಲಾನೆಟ್‍ಗಳಾಗಲೀ, ಮಕ್ಕಳ ಅಚ್ಚುಮೆಚ್ಚಿನ ಡಿಸ್ನಿ, ಕಾರ್ಟೂನ್ ನೆಟ್ವರ್ಕ್, ಪೋಗೊ ಮುಂತಾದ ವಾಹಿನಿಗಳಾಗಲೀ, ಇಲ್ಲವೇ ಜಗತ್ತಿನ ಅತ್ಯುತ್ತಮ ಮನರಂಜನೆಯ ಚಿತ್ರಗಳನ್ನಾಗಲೀ ಕನ್ನಡಿಗರು ಕನ್ನಡದಲ್ಲಿ ನೋಡಿ ಸವಿಯಲಾಗದಂತಹ ಪರಿಸ್ಥಿತಿ ಹುಟ್ಟಿದೆ. ಇದರಿಂದಾಗಿ ಹಣ ತೆತ್ತು ಮನರಂಜನಾ ಕಾರ್ಯಕ್ರಮಗಳನ್ನು ನೋಡುವ ಕನ್ನಡಿಗ ಗ್ರಾಹಕನಿಗೆ ತನ್ನ ಇಷ್ಟದ ನುಡಿಯಲ್ಲಿ ತನಗಿಷ್ಟವಾದದ್ದನ್ನು ನೋಡುವ ಆಯ್ಕೆ ಸ್ವಾತಂತ್ರ್ಯವಿಲ್ಲದಂತಾಗಿದೆ. ಕನ್ನಡಿಗರ ಪ್ರತಿನಿಧಿಯಾದ ನೀವು ಇದನ್ನು ಸರಿಪಡಿಸಿ ಸಂವಿಧಾನವು ಮಾನ್ಯ ಮಾಡಿರುವ ಆಯ್ಕೆ ಸ್ವಾತಂತ್ರ್ಯವನ್ನು ಕನ್ನಡಿಗರೆಲ್ಲರಿಗೆ ಕಲ್ಪಿಸಲು ಇರುವ ತೊಡಕುಗಳನ್ನು ನಿವಾರಿಸಬೇಕೆಂದು ಈ ಸಹಿ ಸಂಗ್ರಹ ಅಭಿಯಾನದ ಮೂಲಕ ಕೇಳಿಕೊಳ್ಳುತ್ತೇವೆ.

ಇಂತಿ,

ಪ್ರಿಯಾಂಕ್ ಕತ್ತಲಗಿರಿ

ಆನಂದ್ ಜಿ.

ಅನ್ನದಾನೇಶ್ ಸಂಕದಾಳ

ವಲ್ಲೀಶ್ ಕುಮಾರ್

ಗಿರೀಶ್ ಕಾರ್ಗದ್ದೆ

ಬಾಬು ಅಜಯ್

ಮಲ್ಲೇಶ್ ಬಿ. ಜಿ.

ಹರಿಪ್ರಸಾದ್ ಹೊಳ್ಳ

Petition Closed

This petition had 2,241 supporters

Share this petition

Share this petition in person or use the QR code for your own material.Download QR Code

Decision Makers

  • Chief minister of Karnataka, ಮುಖ್ಯಮಂತ್ರಿಗಳು ಕರ್ನಾಟಕ
  • ಶ್ರೀ ಉಮಾಶ್ರೀ/Shri Umashreeಮಂತ್ರಿಗಳು, ಕನ್ನಡ ಮತ್ತು ಸಂಸ್ಕ್ರುತಿ ಇಲಾಖೆ/Minister, ministry of Kannada and culture
  • ಶ್ರೀ ರೋಶನ್ ಬೇಗ್/Shri Roshan Baigಮಂತ್ರಿಗಳು, ವಾರ್ತಾ ಮತ್ತು ಪ್ರಚಾರ ಇಲಾಖೆ/Minister, ministry of information and broadcast